ಜಾತ್ರೆ ಜೋರು
ಸುರಪುರದ ಜಾತ್ರೆ ಹೊರಟರು ಯಾತ್ರೆ
ಬದುಕಿನ ತೇರು ಸೂರುತಿಹಾ ಸೂರು
ಮನದ ಮಳಿಗೆ ನೆನೆದಾಯ್ತು ಮಳೆಗೆ
ಕೊರೆವ ಚಳಿಗೆ ಬಿಸಿಯಾದ ಘಳಿಗೆ
ಬಾವದ ಬಕುತಿ ನಿಡೈತಿ ಮುಕ್ತಿ
ಕೊನೆಯಗೋ ಕನಸಿಗೆ ಬಂದೈತಿ ಶಕ್ತಿ
ನೆರೆ ಬಂದರೇನು ಒರೆ ಹೋದರೇನು
ನಡೆದಯ್ತಿ ಕುಣಿದಯ್ತಿ ಸುರಪುರದ ಜಾತ್ರೆ
ಜೀವನದ ಸೋಗಡು ಅವರೇಕಾಯಿ
ರುಚಿಸೀತೆ ಕಹಿಯಾ ಉಪ್ಪಿನಕಾಯಿ
ಮನದಾಸೆ ಏಕೋ ನೆಲ್ಲಿಕಾಯಿ
ಕನಸಿಗೆ ಬೇಕು ಒಂದೂ ತೆಂಗಿನಕಾಯಿ
ಜಾತ್ರೆಯಲಿ ತೇರು ಪುರಿಕಾರ ಸೇರು
ಮನೆಮಂದಿಯಲ್ಲ ಹೋಗೈತಿ ಮಾರು
ಬದುಕಿನ ಬವಣೆ ರುಚಿಸದ ಕೀರು
ನಡೆದಾಯ್ತೆ ನಮ್ಮವರ ಜಾತ್ರೆಯು ಜೋರು
*****-*****ರಚನೆ ***************
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment