ಏಕೆ ಹೀಗೆ ಕಾಡಿದೆ
ಒಲವು ಏಕೆ ನನ್ನ ಹೀಗೆ ಕಾಡಿದೆ
ಹರಿವ ಮನವು ತಿಳಿಯದೆ ಹೋಡಿದೆ
ಮನವ ನಾನು ಹಿಡಿವ ಅಸೆ ಮೂಡಿದೆ
ನೂರು ನೆನಪು ಕಣ್ಣ ಮುಂದೆ ಬಂದಿದೆ
ಒಲವು ಒಂದೂ ಅರಿಯದ ಮಾಯೆ
ಮನವು ತಾಳಕೆ ಸಿಗದೇ ಕುಣಿವ ಛಾಯೆ
ಎರಡು ಕೂಡಿ ಹೃದಯವನ್ನು ಕೊಂದಿದೆ
ನಿಂತು ನಿಲ್ಲದ ದೇಹವೇಕೋ ಬೆಂದಿದೆ
ಬರೆಯೋಲೋರಾಟೆ ಪ್ರೀತಿ ಕವನ
ಸಿಗಳು ಅವಳು ಎಂದು ತಿಳಿದಿದೆ ಮನ
ಯಾರಿಗಾಗಿ ಬರೆಯಲಿ ಬಿಳಿ ಕಾಲಿ ಪುಟದಲ್ಲಿ
ಸಾವು ಕೂಡ ಬಂದು ಹೋಗೋ ಮನದಲ್ಲಿ
ಕನಸುಗಳ ಕಟ್ಟಿದೆ ಪ್ರೀತಿ ಕದವ ತಟ್ಟಿದೆ
ನೆನಪುಗಳ ಮುಟ್ಟಿದೆ ನಯನವೆಕೋ ಸೋತಿದೆ
ಮನಸ್ಸು ಇಂದು ಬಾಡಿದೆ ನೋವಲ್ಲಿ ಕರಗಿದೆ
ಅರಿತು ಬೆರೆತು ಕುಣಿವ ವಯಸ್ಸು ಇಂದು ಸತ್ತಿದೆ
********-*ರಚನೆ *************
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment