ನಿನಗೆ ತಿಳಿಯದೆ
ತಿಳಿಯದೆ ತಿಳಿಯದೆ ನನ್ನ ಮನಸ್ಸು ನಿನಗೆ
ತಿಳಿಯದೆ
ಒಲವು ಮೂಡಿದೆ
ನಿನಗಾಗಿ ಕಾದು ಕೂತಿದೆ
ಮನದಲಿ ನೂರಾಸೆ ಏಕೋ
ನೀನೇ ಬೇಕು ನನಗೆ ಎಂದಿದೆ
ಬದುಕಲಿ ಅಸೆ ಒಂದೂ
ನೀನು ನನ್ನವಳೆಂದು
ಮನಸ್ಸು ಏಕೋ ಕೂಗಿ ಹೇಳಿದೆ
ಒಲವು ಒಂದೂ ಮೌನ
ನೀನು ಬಾ ಬಾಳಿಗೆ ಎಂದಿದೆ
ತಿಳಿಯದೆ ತಿಳಿಯದೆ ನನ್ನ ಮನಸ್ಸು ನಿನಗೆ
ತಿಳಿಯದೆ
ನೋವಿನ ಯಾತನೆಯೊಂದು
ನೀರಿನಂತೆ ಮನದಿ ಹರಿದಿದೆ
ಕಣ್ಣಾರೆಪ್ಪೆ ಮುಚ್ಹೋವರೆಗೆ
ನಿನ್ನ ನೆನಪು ಏಕೋ ನನಗೆ
ನಿದಿರೆ ಏಕೋ ಬಾರದಾಗಿದೆ
ಕಾಲವೆಲ್ಲ ಮುಂದೆ ಹೋಗಿ
ಮತ್ತೆ ಹಿಂದೆ ಬಾರದಾಗಿದೆ
ಕಾಮನಬಿಲ್ಲು ಬದುಕ ಬಣ್ಣ ಮೂಡಿ
ಸುರಿವ ಒಲವ ಮಳೆಯೂ ನಿಂತು ಹೋಗಿದೆ
ನೀನು ಇರದೇ ಮಾತು ಒಂದೂ
ನೀನೇ ನನ್ನ ಒಲವು ಎಂದಿದೆ
ತಿಳಿಯದೆ ತಿಳಿಯದೆ ನನ್ನ ಮನಸ್ಸು ನಿನಗೆ
ತಿಳಿಯದೆ
**********ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment