ಕನ್ನಡ ಸಾಹಿತ್ಯ
ಮನ ಮನದಲಿ ಮೂಡಲಿ ಸಾಹಿತ್ಯ
ಚಿಣ್ಣರ ಮನದಲಿ ಚಿಗುರಲಿ ಸಾಹಿತ್ಯ
ಜಿಲ್ಲೆಯ ಊದ್ದಲು ಹರಡಲಿ ದಿನ ನಿತ್ಯ
ಪ್ರತಿ ದಿನವೂ ಹಬ್ಬದ ಕನ್ನಡ ಸಾಹಿತ್ಯ
ಸಾಹಿತ್ಯ ಸೇವೆಗೆ ಶ್ರಮಿಸುವ ಉಸಿರಲಿ
ನೂರಾರು ಕನಸು ಹೊತ್ತ ಸಾಹಿತ್ಯ ಹೆಸರಲಿ
ನಮ್ಮಯ ನಲ್ಮೆಯ ಮನದ ಕಥೆಯಲಿ
ಸಾಹಿತ್ಯ ಸೇವೆಯಲ್ಲಿ ಬೆಳೆದ ಬೆಳೆಯಲಿ
ಕನ್ನಡ ಕನ್ನಡ ಏನಲು ಹರಿಯಲಿ ಸಾಹಿತ್ಯದ ಹೊನಲು
ಪಸರಿಸಲಿ ಜೆಲ್ಲೆಯ ತುಂಬಾ ಕನ್ನಡದ ಕಡಲು
ನಮೆಲ್ಲರ ಮನದಲಿ ತುಂಬಲಿ ಸಾಹಿತ್ಯದ ಒಡಲು
ಸಾಹಿತ್ಯದ ಬತ್ತದ ನದಿಯು ಬರಲು
ಕನ್ನಡವೆನಲು ಕುಣಿವುದು ಮನಸು
ಕನ್ನಡ ತಾಯಿಯೇ ನಮ್ಮನು ಹರಸು
ಕನ್ನಡಕಾಗಿ ಕವಿಗಳ ಸೇವೆ
ನಿತ್ಯವೂ ನಡೆಯಲಿ ಸಾಹಿತ್ಯದ ಒಲವೇ
*******ರಚನೆ *********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment