ಪ್ರೀತಿಯ ಪಯಣ
ಕಾಡಿನಲಿ ರಾತ್ರಿ
ನನ್ನೊಬ್ಬ ಯಾತ್ರಿ
ಬೆಚ್ಚನೆ ಗೂಡು
ಚಳಿಯ ಮರೆತು ಹಾಡು
ಮುಂಜಾನೆ ಮಂಜು
ಇಡಿದಂತೆ ಪಂಜು
ಉದಯಿಸಿದ ಸೂರ್ಯನ ಕಿರಣ
ಇಬ್ಬನಿ ಹನಿಯ ಮರಣ
ದಾರಿಯಲ್ಲಿ ಹೊರಟೆ
ಮಾಡುತಾ ಅರಟೆ
ಕಾವಲುಗರ ಬಂದ
ಹೇಳಿದ ಹುಲಿಯಾಯೇತೆ ಮುಂದ
ಹೆದರದೆ ನಡೆದೇ
ಹುಲಿಯೊಂದು ಬಂತು
ತುಸುದೂರ ನಿಂತು
ಮನಸಾರೆ ಕರೆದೆ
ಸಿಟ್ಟೇಕೋ ಹುಲಿರಾಯ
ಸುಮ್ಮನೆ ಹೋರಾಡುವೆ ಮಹರಾಯ
ಘರ್ಜಿಸಿತು ಹುಲಿಯು
ಕೇಳಿತು ನನ್ನ ಬಲಿಯು
ಹೇಗಾರಿದ ಹುಲಿಗೆ
ಗುಂಡಿನ ಮಳೆಗೆ
ಹುಲಿಯಾಯ್ತು ಶವವು ಕಲಕಿತು ಮನವು
*********ರಚನೆ ****-*-*
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment