ಬಾಳಿನ ಬೆಳಕು

 


ಭರವಸೆಯ ಬೆಳುಕು ಮೂಡಿತು

ಸೋಲೇಂಬ ಕತ್ತಲೆ ಕಳೆಯಿತು

ಆಸೆಗಳ ಕನಸು ಮೊಳೆಯಿತು

ಕಣ್ಣೀರ ಹನಿ ಕಥೆಯು ಬಾಡಿತು


ದುಡೀಬೇಕು ಶ್ರಮಪಟ್ಟು

ಬೆವರ ಹನಿ ಪಣಕ್ಕಿಟ್ಟು

ಕಷ್ಟಗಳ ಬದಿಗಿಟ್ಟು

ಕೆಲಸದಲ್ಲಿ ಮನಸಿಟ್ಟು


ನೂರಸೆ ಕನಸು ಛಲ

ಮನದಲ್ಲಿ ಆನೆ ಬಲ

ಇಟ್ಟಾಗ ಸಿಗುವ ಫಲ

ಬೂತಾಯಿಯ ನೆಲ


ಬಿಡಬೇಡ ಭರವಸೆ

ತೋರು ನಿನ್ನ ವರಸೆ

ದೃಢವಿರಲಿ ನಿನ್ನ ಗುರಿ

ಸರಿ ಇರಲಿ ನಿನ್ನ ದಾರಿ


ದೇವರನು ನೀ ನಂಬು

ಬಾರದಿರಲಿ ಜಂಬದ ಕೊಂಬು

ಕೃಪೆಯೊಂದು ಅವನಿಡಲು

ಕೆಲಸದಲ್ಲಿ ಮನವಿರಲು


ಸುಡುವ ಬಿಸಿಲು

ಕೊರೆವ ಚಳಿಯು

ಬೆವರ ಬಿಸಿ ಹನಿಯು

ಏಳುವುದು ಕಾಯಕವೇ ಕೈಲಾಸ


ಅರಿತು ನಡೆ ಓ ಮನುಸ

ಕಾಣುವೆ ನೀನು ಸುಖ ದಿವಸ 

ಜೀವನ ತುಂಬಲಿ ಬಲು ಹರುಷ

ಕಾಯಕವೇ ಕೈಲಾಸ 


*********ರಚನೆ ********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಭಾವಗೀತೆ -51

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ