ಮನದ ನಗುವಾಗು
ಒಲವ ಹೂವಾಗು
ಮನದ ನಗುವಾಗು
ನನ್ನಯ ಕನಸಾಗು
ಪ್ರೀತಿಯ ಹೃದಯಕೆ ಆಸರೆಯಾಗು
ನೆನಪಿನ ಅಂಗಳದಿ
ಹುಣ್ಣಿಮೆಯ ಬೆಳಕು
ಕಣ್ಣೆರಡು ಸಾಲದು
ನೋಡಲು ಚಂದ್ರನ ತಳುಕು
ನಕ್ಷತ್ರವೊಂದು ನಗುತಿತ್ತು
ನಿನ್ನ ಅಂದವ ನೋಡಿ
ಹಸಿರಾದ ಹುಲ್ಲುಗರಿಯು
ಕರೆಯುತಿತ್ತು ನೀನಿಟ್ಟ ಪಾದವ ತಿಡಿ
ಕಣ್ಣಿನ ನೋಟಕೆ
ಸುಂದರ ಮೊಗಕೆ
ನಸುನಗುವ ಮನಕೆ
ಯಾರಿಟ್ಟರು ಹೆಸರು ಒಲವಿಗೆ ಪ್ರಕೃತಿಯೇ ಉಸಿರು
**********ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment