ಹರಿವ ನದಿ
ಹರಿವ ನದಿಯುಜುಳು ಜುಳು ಶಬ್ದವ ಮಾಡಿ
ಯಾರು ನನ್ನವರಿಲ್ಲಿ ಹರಿವೆ ಎಲ್ಲವ ತುಳಿದು
ಕಾಡಿನಲಿ ಹರಿಯುತ
ಗುರಿ ಎಲ್ಲಿ ನನಗೆ
ಹೊಡುತ್ತಿರುವೆ ಸಮುದ್ರದ ಕಡೆಗೆ
ಯಾರು ಬಲ್ಲರು ನನ್ನ ಪಯಣದ ಬದುಕು
ಸಿಕ್ಕವರ ಕೊಚ್ಚಿ ನಡೆಯುತಿರುವೆ
ತಳ್ಳಿ ದೂರಕೆ ಗಾಡಿ ಸರಕು
ದಡದಲ್ಲಿಯ ಗಿಡವೊಂದು ಕೇಳಿತು ಬಿಡುವೆಯ ನನ್ನ
ಬೂಮಿಯಲಿ ಬೇರು ಬಿಟ್ಟು
ಜನರಿಗೆ ಕೊಡುವೆನು ಹಣ್ಣ
ಕಲ್ಲುಗಳ ಕೊರೆದು ಮಣ್ಣನು
ಬಡಿದು ಹರಿವ ನದಿ ನಾನು
ಎದುರಿಗೆ ಸಿಕ್ಕರೆ ಬಿಡೆನು
ಯಾವ ಗಿಡವನ್ನು
ಹೊರಟಿತು ನದಿಯು ಕಾಣದ ಊರಿಗೆ
ಸೇರಲು ಗುರುತು ಸಿಗವ ಕಡಲಿಗೆ
ಕುಡಿದರೆ ನೀರು ಉಪ್ಪು ಬಣ್ಣ ನೀಲಿ
ಎಲ್ಲಿಹೋಯ್ತು ನದಿಯ ಸಿಹಿ ಒಲವಿನ ತಿಳಿ
**********ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment