ಬೆಂದ ಬದುಕು



ಜೀವನದ ನೋವಿನಲಿ ಬೆಯುತಿದೆ ಮನವು

ಬದುಕು ಕಲಿಸಿದ ಪಾಠಕೆ ನಡುಗುತಿದೆ ತನುವು

ಅಸೆ ಒಂದೂ ಜೀವಂತ ಬಿಡಿಸಿ ಏಳಿದೆ ಒಲವು

ಕನಸುಗಳು ಇಲ್ಲದೆ ದೂರ ನಿಂತಿದೆ ಗೆಲುವು


ಸಂಸಾರದ ಬವಣೆಯಲಿ ಸುರಿಯುತಿದೆ ಬೆವರು

ಮೂಡಲಿಲ್ಲ ಯಾಕೋ ನೊಂದ ಮನದಿ ಹಸಿ ಚಿಗರು

ತಿನ್ನ ಹೊರಟ ಊಟವೆಲ್ಲ ನಿನ್ನ ನೆನಪಿನ ಒಗರು

ಮನಸ್ಸು ಕನಸ್ಸಗಳ ನಡುವೆ ಗುದ್ದಯತೆ ಟಗರು



ಸೂರಿಲ್ಲದ ಊರಲಿ ಸೋರಗಿದೆ ಒಲವು

ಬರಡು ಬದುಕಲಿ ಒಲವ ಹುಡುಕಿದೆ ಚಲವು

ಸೋತ ಜೀವಕೆ ಅಳು ಮನಸಿಗೆ ಇನ್ನೇಲಿದೆ ನಲಿವು

ಏಕೆ ಕೊಟ್ಟನು ದೇವರು ನೋಯಿಸಲು ವರವು 


ಸಾಕಾಯಿತು ಜೀವನ  ಮನಸ್ಸು ಬೇಡುತಿದೆ ಮರಣ

ಶಫೀಸುತಿದೆ ಮನವು ಬೇಡುವಗಿತ್ತು ಈ ಜನನ

ತನುವು ಹಾಡೊಂದ ಹಾಡಿದೆ ಶ್ರುತಿಯಿಲ್ಲದ ಚರಣ

ಬಿಟ್ಟೋಗೋ ಬಾಳಿಗೆ ಹೇಳಿ ಹೋಗು ಕಾರಣ


ಎಳುಬಿಳಿನ ನಡುವೆ ಕಾಲ ಕಳೆಯಿತು

ಜನನ ಮರಣದ ನಡುವೆ ಬದುಕು ನಡೆಯಿತು

ಬದುಕಿದ ಜೀವನ ನೋವಲಿ ಬೆಂದಿತು

ಅಳು ದೇವರ ಪಾಳು ಜೇವನವ ಶಪಿಸಿ ಹೊರಟಿತು 



*********ರಚನೆ **********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35