ದೀಪಾವಳಿ
ದೀಪಗಳ ಸಾಲು
ಬೆಳಕಿನ ಹೊನಲು
ಕಣ್ಮುಂದೆ ಬರಲು
ನವ ಜೀವನ ಬಂತು ಹೊಸತನವ ತಂತು
ನಾಳೆಎಂಬುದು ಬೆಳಕು
ನೆನ್ನೆ ಎಂಬುದು ಇರುಳು
ಮದ್ಯೆ ನಡೆವ ತಿರುಳು
ಬಲ್ಲವನಾರು ನೀ ಹೇಳು ಮರುಳು
ಬದುಕು ಬೆಂಡಾಗಿರಲು
ಜೀವನಕ್ಕೆ ಸೊಗಸಲ್ಲಿ
ಮನವೂ ಕತ್ತಲೆಯಲಿ
ಅಣತೆಗಳ ಹಚ್ಚಿ ಕನಸಿನ ಕದ ಬಿಚ್ಚಿ
ದೀಪಾವಳಿಯ ದೀಪ
ಬೆಳಗಲಿ ಬಾಳಲ್ಲಿ ರೂಪ
ಮನವು ಮರುಗಿ ಕತ್ತಲೆ ಕರಗಿ
ನಮ್ಮೆದೆಯ ಅಸೆ ನನಸಾಗಲಿ ಕನಸೇ
**********ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment