ಮೂಕ ವೇದನೆ
ಮನಸಿನೊಳಗೆ ಅವಿತು ಕೂತ ಮೂಕ ಕನಸಿದು ಹೃದಯ ಘಾಸಿ ಮಾಡಿ ರಕ್ತ ಸುರಿಸಿದ ನೋವ ಮಾತಿದು ಮೂರು ದಿನದ ಬದುಕಲಿ ಏಕೋ ನೊಂದ ಕೂಗಿದು ಯಾರನ್ನು ಹೊಣೆ ಮಾಡಲಿ ಹಾಳು ಹಣೆಬರಹದ ನೋವಿದು ದೇಹದ ಒಳಗೆ ಕಂಪಿಸಿ ಮೌನದೀ ಮೂಕ ಮಾತನಾಡಿವೆ ಆಸೆ ಕೆರಳಿಸೋ ಕಣ್ಣುಗಳು ಚೂರಿ ಇಡಿದು ಕಾದು ಕುಂತಿವೆ ತುಟಿಗಳೆರಡು ಕೆಂಡದಿ ನೊಂದು ಬೆಂದು ರಕ್ತ ಕಾರಿವೆ ಕೆನ್ನೆಗಳು ಚದುರಿ ಅದುರಿ ಬೆದರಿ ಸುಕ್ಕು ಕಟ್ಟಿವೆ ವಯಸ್ಸು ಹಸಿಬಿಸಿ ಪ್ರಣಯದ ಬಯಕೆ ತೋರಿ ನಗುತಿದೆ ಮೂಡಿದ ಮಲ್ಲಿಗೆ ಬಾಡಿ ಸುಗಂಧ ಕೊಳೆತು ನಾರಿದೆ ಹುಚ್ಚುಕೊಡಿ ಮನಸು ಕುಣಿದು ಮಸಣವಾಗಿ ನಿಂತಿದೆ ಬಯಕೆಗಳು ಬಾಯಾರಿ ಬೆವೆತು ಮೈ ಮುದ್ದೆಯಾಗಿದೆ ಯಾರು ಬರೆದ ಕತೆಗೆ ಇನ್ನ ಯಾರೋ ನಾಯಕ ಆಡಿಸುವವನ ಸೂತ್ರದಲ್ಲಿ ಆಡೋ ಆಟವೇ ಸೂತಕ ಕರುಣೆ ಇಲ್ಲದ ವಿಧಿಯ ನಡೆಗೆ ಕೊಡಲಿ ಪೆಟ್ಟು ಬಿದ್ದಿದೆ ಹಣೆಬರಹ ಬರೆದ ಬ್ರಹ್ಮನ ವಿಧಿಯು ಶಪಿಸಿ ಕುಂತಿದೆ ************ರಚನೆ******** ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ