ಮಕ್ಕಳ ಗೀತೆ -11

 



🌹ಗರಿ ಗರಿ ನವಿಲು 🌹


ಗರಿ ಗರಿ ನವಿಲೇ ಗರಿ ಗರಿ ನವಿಲೇ 

ಏನಿದು ನಿನ್ನಯ ಬಣ್ಣ 

ಮಳೆಯೂ ಬಂದರು ಬಿಸಿಲು ಇದ್ದರೂ 

ಮಾಸದು ಗರಿಯ ಬಣ್ಣ 


ಗೆಳೆಯನು ಕೊಟ್ಟ ನವಿಲು ಗರಿಯ 

ಪುಸ್ತಕದೀ ನಾ ಮುಚ್ಚಿಟ್ಟೆ 

ನಾಲ್ಕು ದಿನಗಳು ಕಳೆದ ಮೇಲೆ 

ನಿನ್ನಯ ಗರಿಗೆ ನಾ ಮುತ್ತಿಟ್ಟೆ


ಅಂದದ ಹುಡುಗಿ ಚೆಂದವ ತೋರಿ

ಕೇಳಿದಳು ನವಿಲು ಗರಿಯ

ಓಗೆ ಹುಡುಗಿ ಕೊಡೇನು ನಾನು 

ನವಿಲು ಗರಿ ಹಾಕುವುದಿಲ್ಲ ಮರಿಯಾ 


ಗರಿಯ ನವಿಲು ಮರಿಯಾ ಹಾಕದೆ 

ಮೊಗದಲ್ಲಿ ಇರಲಿಲ್ಲ ಕಳೆ 

ಹೊಲದಲ್ಲಿ ನವಿಲು ಗರಿ ಬಿಟ್ಟು 

ಹಾಡಿತು ಹೊಸ. ಬೆಳೆ


ನವಿಲೂ. ರೆಕ್ಕೆ ಬಡಿದು ಹಾರಿತು ಆಗಸಕ್ಕೆ 

ಗರಿಯೂ ಉದುರಿತು ನೆಲಕೆ

ಹಾಯ್ದ  ಗರಿಯನು.  ದೇವರಿಗೇ ಕೊಟ್ಟೆ 

ನನ್ನಯ ಮನವನು ನವಿಲಿಗೆ ಬಿಟ್ಟೆ 


ಗರಿಗರಿ ನವಿಲೇ ಗರಿ ಗರಿ ನವಿಲೇ 

ಏನಿದು ನಿನ್ನಯ ಬಣ್ಣ 

ಮಳೆಯೂ ಬಂದರು ಬಿಸಿಲು ಇದ್ದರೂ 

ಮಾಸದು ಗರಿಯ ಬಣ್ಣ 

***********ರಚನೆ ********

ಡಾ. ಚಂದ್ರಶೇಖರ್,ಚನ್ನಾಪುರ ಹಾಲಪ್ಪ

Comments

Popular posts from this blog

ನೋವು ತುಂಬಿ

ಹಣತೆ ಆಳುತಿದೆ

Author biography of Chandrashekhar Channapura Halappa