ಮಕ್ಕಳ ಗೀತೆ -10

 


🌹ನಮ್ಮ ದೇಶ🌹

ನಮ್ಮ ಉಸಿರು ನಮ್ಮ ದೇಶ

ಏತಕ್ಕಾಗಿ ಹಸಿರು ದ್ವೇಷ 

ದ್ರೋಹ ಮನವ ತುಂಬಿ 

ನಂಬಿದವರ  ಚುಚ್ಚಿ ಕೊಂದಿದೆ 

.

ಕಪ್ಪು ,ಕೆಂಪು ,ಮರಳು, ಮಣ್ಣು 

ಜಾತಿಯೆಂಬ ವಿಷದ ಉಣ್ಣು 

ನಮ್ಮ ನಾಡ ಚುಚ್ಚಿ  ತಿವಿದಿದೆ 

ಸಾವ ಮೋಡ ಕವಿದಿದೆ 


ಭವಿಷ್ಯದ ಎಡೆಗೆ ಚಿಂತೆ ಏಕೆ 

ಈ ದಿನದ ಬದುಕು ಸಾಕೇ

ಬಾಳ  ಹೊಳೆಯಲಿ  ಈಜಲು 

ಜೀವದ ನದಿಯ ದಾಟಲು 


ನೆಲ ,ಜಲ ,ಭಾವ, ಭಾಷೆ

ನಾಡು ಕಲೆ., ಬಣ್ಣ ,ವೇಷ 

ಉಸಿರು ತುಂಬಾ ತುಂಬಿದೆ 

ನೂರು ಕಥೆಯ ಹೇಳಿದೆ 


ಮೈಕೊಡವಿ ಮುಂದೆ ಸಾಗು 

ಪ್ರೀತಿಗಾಗಿ ತಲೆಯ ಬಾಗು 

ನಾಡ ಸಮೃದ್ಧಿಗಾಗಿ ದುಡಿ 

ಕಟ್ಟು ನೀನು ಪ್ರೇಮದ ಗುಡಿ


***********ರಚನೆ ********


ಡಾ.ಚಂದ್ರಶೇಖರ್ ಚನ್ನಾಪುರ ಹಾಲಪ್ಪ

Comments

  1. ರವಿ ದೇವರಡ್ಡಿMay 9, 2025 at 1:05 AM

    ಚನ್ನಾಗಿದೆ

    ReplyDelete

Post a Comment

Popular posts from this blog

ನೋವು ತುಂಬಿ

ಹಣತೆ ಆಳುತಿದೆ

Author biography of Chandrashekhar Channapura Halappa