ನಮ್ಮತನವ ಮೆರೆಯುವೆ
ಏ ಮನುಜ ನೀನು ಮೌಢ್ಯದಿಂದ ಎದ್ದು ಬಾ
ಮೂಡನಂಬಿಕೆಗಳನ್ನು ಬದುಕಲ್ಲಿ ಕಿತ್ತು ಬಾ
ಹಳೆಯ ಒಳಿತು ಉಳಿಸಿ ಹೊಸತು ಬೆಳಸು ಬಾ
ಮನ ಮನೆಗೆ ಜ್ಞಾನ ತುಂಬಿ ರಾಷ್ಟ್ರದ ಹಣತೆ ಬೆಳಗು ಬಾ
ಸ್ವಚ್ಛ ಸಮಾಜದ ಬದುಕಿನ ಜೀವ ನೀನು
ಸಮಾಜದ ಒಳಿತಿಗಾಗಿ ಬಾಳಿ ಬದುಕು ನೀನು
ಕಷ್ಟಗಳನ್ನು ನಿರ್ವಹಿಸಿ ಕಾನೂನುಗಳ ಗೌರವಿಸು ನೀನು
ಮೋಸವನ್ನು ತೊಡೆದು ಹಾಕಿ ಒಳಿತನ್ನು ಉಳಿಸು ನೀನು
ಜಾತಿಗಳ ಬೇರು ಬಿಟ್ಟು ನೀತಿ ನಿಯಮ ಮರೆತಿವೆ
ಮೇಲು-ಕೀಳು ಭಾವಗಳು ಬದುಕನ್ನು ಕೊಂದಿವೆ
ನಾನು ಎಂಬ ಅಹಂಕಾರ ಮರೆತು ನಾವು ಎಂದು ಎನ್ನುವೆ
ಸರ್ವರಿಗೂ ಸಮಪಾಲು ಸಹಬಾಳ್ವೆ ಎಂದು ನೀನು ತೋರುವೇ
ನೆಲ, ಜಲ,ಗಾಳಿಯನ್ನು ಮಲಿನ ಮಾಡಿ ಪರಿಸರವ ಕೊಂದಿಹೆ
ದಿನವೂ ಆಚರಣೆಗಳ ಮೂಲಕ ನಾಟಕ ಮಾಡಿಹೆ
ಮಲಿನವಾದ ಪ್ರಕೃತಿ ತೋರುತ್ತಿದೆ ನಿನಗೆ ವಿಕೃತಿ
ಪರಿಸರವ ಸ್ವಚ್ಛ ಮಾಡಿ ತೋರು ಸಂರಕ್ಷಿಸುವ ಸುಕೃತಿ
ನೂರು ಭಾಷೆ ಆಚಾರ ವಿಚಾರಗಳು ನಮ್ಮ ನಡೆಯ ಸಾರಿವೆ
ಹಬ್ಬ ಹರಿ ದಿನಗಳು ನಮ್ಮ ಸಂಸ್ಕೃತಿಯ ತೋರಿವೆ
ಆಹಾರಗಳ ವೈವಿಧ್ಯತೆ ನಮ್ಮ ಬೇರೆ ಮಾಡಿವೆ
ಎಲ್ಲವನ್ನು ಸಹಿಸಿ ಬೆಳೆಸಿ ಎಂದು ನಮ್ಮತನವ ಮೆರೆಯುವೆ
**********ರಚನೆ**********
ಡಾ. ಚಂದ್ರಶೇಖರ್ .ಸಿ.ಹೆಚ್
Comments
Post a Comment