ಶಿಶು ಗೀತೆ
🌹ಮುದ್ದು ಕಂದಮ್ಮ🌹
ನನ್ನ ಮುದ್ದು ಕಂದಮ್ಮ
ನಗುವಿನ ಮೊಗವ ತೋರಮ್ಮ
ಪಿಳಿ ಪಿಳಿ ಕಣ್ಣನು ಬಿಟ್ಟು
ತೊಟ್ಟಿಲಲ್ಲಿ ಮಲಗಮ್ಮ
ನೀನು ತುಂಬಾ ಮುದ್ದು
ನಾನು ನಿನ್ನ ಪೆದ್ದು
ಎದೆಯ ಮೇಲೆ ಅಂಗಾಲಿಟ್ಟು
ಸುಮ್ಮನೆ ನೀನು ಚಿರಮ್ಮ
ಅಮ್ಮ ತೊಟ್ಟಿಲು ಕಟ್ಟವಳೇ
ಎಣ್ಣೆ ಸ್ನಾನ ಮಾಡ್ಸವಳೇ
ಬಿಸಿ ಬಿಸಿ ನೀರು ಮೈಮೇಲೆ ಹೊಯ್ದವಳೇ
ಬಿಳಿ ಬಟ್ಟೆ ಮೈಗೆಲ್ಲ ಸುತ್ತ್ವಳೇ
ನೀನು ತೊಟ್ಟಿಲಲ್ಲಿ ಬಿದ್ದೆ
ಕಣ್ಣ ತುಂಬ ಮಾಡು ನಿದ್ದೆ
ಅಮ್ಮನ. ಸೀರೆ ಒದ್ದೆ
ನೀನು ಪುಟಾಣಿ ಮುದ್ದೆ
ತೊಟ್ಟಿಲು ಉಯ್ಯಾಲೆ ತುಗೈತಿ
ಅಮ್ಮನ ಜೋಗುಳ ಮುಗಿದೈತಿ
ಕಂದನ ನಿದ್ದೆ ಆಗೈತಿ
ಮೊಗದಲಿ ನಗುವೂ ತುಂಬೈತಿ
********ರಚನೆ*********
ಡಾ. ಚಂದ್ರಶೇಖರ್ ಸಿ.ಹೆಚ್
Comments
Post a Comment