ಖಾಲಿ ಬಾಳಿನ ಪುಟ

 


ಖಾಲಿ ಬಾಳಿನ ಪುಟದಲ್ಲಿ

ನಾನು ಏನೂ ಗೀಚಲಿ

ಬಣ್ಣ ತುಂಬಿದ ಬದುಕಲಿ

ನನ್ನಾ ನಾ ಹೇಗೆ ಹುಡುಕಲಿ


ಸಾಗುತ ಹೊರಟ ಪಯಣ

ನೆನೆಯುತ ನೆನಪಿನ ಮರಣ

ಆಸೆಗಳ ಸುಳಿಯಲಿ ಈಜಿ

ಬಾಳು ಘಮದ ಮಲ್ಲಿಗೆ ಜಾಜಿ


ಕಣ್ಣಾ ಹನಿಯೊಂದು ಕಂಬನಿ ಮಿಡಿದು

ಕಾಣದ ಭಾವವನು ನೆನೆದು

ಹುಡುಕುತ ಹೊರಟಿತು ಊರ

ಅತ್ತಿತು ಬಾಳ ಬಂಡಿಯ ತೇರಾ


ಹುಣ್ಣಿಮೆ ಬೆಳಕಲಿ ಚಂದ್ರನ ಕಂಡಂತೆ

ಹೃದಯದ ಅರಮನೆಗೆ ರಾಣಿ ಅವಳಂತೆ

ನಡೆವ ದಾರಿಯಲಿ ಕತ್ತಲೆ ಸರಿದಂತೆ

ಬಣ್ಣದ ಬದುಕಲ್ಲಿ ಮಿಂಚು ನಕ್ಕಂತೆ


ಎದೆಯಲಿ ಅರಳಿದ ಹೂವು

ನಗದೆ ನೀಡಿತು ಪ್ರೀತಿ ನೋವು

ಕಾರಣ ಹೇಳಲು ಮರೆಯಿತು

ದೂರದ ಬಾನಿನ ಸವಿ ಕರೆಯಿತು


************ರಚನೆ********

ಡಾ.ಚಂದ್ರಶೇಖರ್. ಸಿ. ಹೆಚ್

Comments

Popular posts from this blog

ಭಾವಗೀತೆ -51

ಭಾವ ಗೀತೆ-1

ಭಾವ ಗೀತೆ- 20