Posts

Showing posts from July, 2023

ಬದುಕು ಬಸ್ಸು

Image
  ಬಾಳು ಒಲವಿನ ನೆನಪುಗಳ ಸರಮಾಲೆ ಜೀವನ ಸೋಲು ಗೆಲುವಿನ ಉಯ್ಯಾಲೆ ಮನಸ್ಸು ಅರಿಯಲಾಗದ ಕಬ್ಬಿಣದ ಕಡಲೆ ದೇಹ ಮಾಂಸದ ಮೂಟೆ ನಾ ಬಲ್ಲೆ  ನನ್ನ ನಲ್ಲೆ ಬದುಕು ಎಂಬ ಬಸ್ಸಿನಲ್ಲಿ ಪ್ರಯಾಣಿಕ ನಾನು ದೇವರು ಕೂಟ್ಟವನೆ ಪ್ರಾಣವೆಂಬ ಟಿಕೆಟ್ ಜೊತೆ ಬಂದವರೆಲ್ಲ ಪ್ರಾಯಾಣಿಕರು ಇದ್ದಷ್ಟು ದಿನ ಖುಷಿ ಪಡು ಸುಮ್ನೆ ನಕ್ಕುಬಿಡು ಹಾಗಿದ್ದೆಲ್ಲ ಹಾಗಲಿ ಹೋಗಿದೆಲ್ಲ ಹೋಗಲಿ ಹುಟ್ಟುವಾಗ ಬರಿಗೈ ಸಾಯುವಾಗ ಬರಿಗೈ ಇರುವ ನಾಲ್ಕು ದಿನ ದುಃಖ ಸುಖದ ಚಿಂತೆ ನಾನು ನನ್ನವರು ಎನ್ನುವ ಅಂತೆ ಒಲವ ಕಂತೆ  ಯಾರಿಗೆ ಯಾರೂ ಇಲ್ಲ ಹೋಗುವಾಗ ನಾವು ಇದ್ದಾಗ ನಮ್ಮವರೇ ಎಲ್ಲಾ ಮರೆತು ನೋವ ಕಾವು ಏಷ್ಟು ಬೆಳೆದರು ನೀನು ಆಕಾಶ ಮುಟ್ಟುವುದಿಲ್ಲ ಏಷ್ಟು ತುಳಿದರು ನಿನ್ನ ಭೂಮಿ ಬಿರಿಯುವುದಿಲ್ಲ  ಸಾವು ಎಂಬುದು ಯಾರನ್ನು ಬಿಟ್ಟಿಲ್ಲ ಆಯಸ್ಸು ಮುಗಿದ ಮೇಲೆ ಹೊರಡಬೇಕಲ್ಲ ನಿಲುಗಡೆ ಬಂದ ಮೇಲೆ ಇಳಿಯಬೇಕಲ್ಲ ಜೀವನಕೆ ಜೋತು ಬಿದ್ದರೆ  ಜೀವ ಇರಬೇಕಲ್ಲ  ***********ರಚನೆ********* ಡಾ. ಚಂದ್ರಶೇಖರ್ ಸಿ.ಹೆಚ್

ಮೌನದ ದಾರಿ

Image
  ಮೌನದ ದಾರಿಯಲ್ಲಿ ನೆನಪುಗಳ ಕಲರವ ಸಾಗಿತು ಸಮಯ ತಿಳಿಯದೆ ನಿನ್ನೊಲವ ಬದುಕು ಒಂದು ಸುಂದರ ಪಯಣ ಕಾದಿದೆ ಈ ಮನ ಬರೆಯಲು ಸುಂದರ ಕವನ ಕವನದ ಸಾಲುಗಳು ಹೇಳಿದೆ ನೀನೇ ಗೆಳತಿ ನನ್ನ ಬಾಳ ದಾರಿಯಲ್ಲಿ ಬಣ್ಣದ ಕನಸಿನ ಒಡತಿ ಪದಗಳಿಗೆ ಸಿಗದ ಹಾಡು ನೀನು ಆ ಹಾಡಿಗೆ ಕಳೆದೋದ ಮೂಕ ಪ್ರೇಮಿ ನಾನು ಬಾಳ ಬಂಡಿಯಲ್ಲಿ ಬದುಕು ಸವೆದಿದೆ ಬಣ್ಣಗಳ ನಡುವೆ ಜೀವನ ಅರಳಿದೆ ನೀನು ಇಲ್ಲದೆ ಒಲವು ಎಲ್ಲಿದೆ ನೀನೇ ಬೇಕೆಂದು ಮನವು ಕೂಗಿದೆ ಮೌನದ ದಾರಿಯಲ್ಲಿ ನೆನಪುಗಳ ಕಲರವ ಸಾಗಿತು ಸಮಯ ತಿಳಿಯದೆ ನಿನ್ನೊಲವ **********ರಚನೆ******** ಡಾ. ಚಂದ್ರಶೇಖರ್ ಸಿ.ಹೆಚ್

ಖಾಲಿ ಬಾಳಿನ ಪುಟ

Image
  ಖಾಲಿ ಬಾಳಿನ ಪುಟದಲ್ಲಿ ನಾನು ಏನೂ ಗೀಚಲಿ ಬಣ್ಣ ತುಂಬಿದ ಬದುಕಲಿ ನನ್ನಾ ನಾ ಹೇಗೆ ಹುಡುಕಲಿ ಸಾಗುತ ಹೊರಟ ಪಯಣ ನೆನೆಯುತ ನೆನಪಿನ ಮರಣ ಆಸೆಗಳ ಸುಳಿಯಲಿ ಈಜಿ ಬಾಳು ಘಮದ ಮಲ್ಲಿಗೆ ಜಾಜಿ ಕಣ್ಣಾ ಹನಿಯೊಂದು ಕಂಬನಿ ಮಿಡಿದು ಕಾಣದ ಭಾವವನು ನೆನೆದು ಹುಡುಕುತ ಹೊರಟಿತು ಊರ ಅತ್ತಿತು ಬಾಳ ಬಂಡಿಯ ತೇರಾ ಹುಣ್ಣಿಮೆ ಬೆಳಕಲಿ ಚಂದ್ರನ ಕಂಡಂತೆ ಹೃದಯದ ಅರಮನೆಗೆ ರಾಣಿ ಅವಳಂತೆ ನಡೆವ ದಾರಿಯಲಿ ಕತ್ತಲೆ ಸರಿದಂತೆ ಬಣ್ಣದ ಬದುಕಲ್ಲಿ ಮಿಂಚು ನಕ್ಕಂತೆ ಎದೆಯಲಿ ಅರಳಿದ ಹೂವು ನಗದೆ ನೀಡಿತು ಪ್ರೀತಿ ನೋವು ಕಾರಣ ಹೇಳಲು ಮರೆಯಿತು ದೂರದ ಬಾನಿನ ಸವಿ ಕರೆಯಿತು ************ರಚನೆ******** ಡಾ.ಚಂದ್ರಶೇಖರ್. ಸಿ. ಹೆಚ್