ಬದುಕು ಬಸ್ಸು

 



ಬಾಳು ಒಲವಿನ ನೆನಪುಗಳ ಸರಮಾಲೆ

ಜೀವನ ಸೋಲು ಗೆಲುವಿನ ಉಯ್ಯಾಲೆ

ಮನಸ್ಸು ಅರಿಯಲಾಗದ ಕಬ್ಬಿಣದ ಕಡಲೆ

ದೇಹ ಮಾಂಸದ ಮೂಟೆ ನಾ ಬಲ್ಲೆ  ನನ್ನ ನಲ್ಲೆ


ಬದುಕು ಎಂಬ ಬಸ್ಸಿನಲ್ಲಿ ಪ್ರಯಾಣಿಕ ನಾನು

ದೇವರು ಕೂಟ್ಟವನೆ ಪ್ರಾಣವೆಂಬ ಟಿಕೆಟ್

ಜೊತೆ ಬಂದವರೆಲ್ಲ ಪ್ರಾಯಾಣಿಕರು

ಇದ್ದಷ್ಟು ದಿನ ಖುಷಿ ಪಡು ಸುಮ್ನೆ ನಕ್ಕುಬಿಡು


ಹಾಗಿದ್ದೆಲ್ಲ ಹಾಗಲಿ ಹೋಗಿದೆಲ್ಲ ಹೋಗಲಿ

ಹುಟ್ಟುವಾಗ ಬರಿಗೈ ಸಾಯುವಾಗ ಬರಿಗೈ

ಇರುವ ನಾಲ್ಕು ದಿನ ದುಃಖ ಸುಖದ ಚಿಂತೆ

ನಾನು ನನ್ನವರು ಎನ್ನುವ ಅಂತೆ ಒಲವ ಕಂತೆ 


ಯಾರಿಗೆ ಯಾರೂ ಇಲ್ಲ ಹೋಗುವಾಗ ನಾವು

ಇದ್ದಾಗ ನಮ್ಮವರೇ ಎಲ್ಲಾ ಮರೆತು ನೋವ ಕಾವು

ಏಷ್ಟು ಬೆಳೆದರು ನೀನು ಆಕಾಶ ಮುಟ್ಟುವುದಿಲ್ಲ

ಏಷ್ಟು ತುಳಿದರು ನಿನ್ನ ಭೂಮಿ ಬಿರಿಯುವುದಿಲ್ಲ 


ಸಾವು ಎಂಬುದು ಯಾರನ್ನು ಬಿಟ್ಟಿಲ್ಲ

ಆಯಸ್ಸು ಮುಗಿದ ಮೇಲೆ ಹೊರಡಬೇಕಲ್ಲ

ನಿಲುಗಡೆ ಬಂದ ಮೇಲೆ ಇಳಿಯಬೇಕಲ್ಲ

ಜೀವನಕೆ ಜೋತು ಬಿದ್ದರೆ  ಜೀವ ಇರಬೇಕಲ್ಲ 


***********ರಚನೆ*********

ಡಾ. ಚಂದ್ರಶೇಖರ್ ಸಿ.ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35