ಬಣ್ಣದ ಕಥೆ




ಕಥೆ ಹೇಳ ಹೊರಟಿದೆ ಮನ

ಕೇಳುವರ್ಯಾರು ಅನುದಿನ

ಮುಂಜಾನೆ ಕಂಡೆ ರಂಗೋಲಿಯನ

ಬಿಡಿಸಿದವಳು ನನ್ನ ಸ್ವಪ್ನ


ಬಣ್ಣಗಳು ಹೇಳುತ್ತಿವೆ ಕವನ

ನೋಡಲು ಸಾಕೆ ಎರಡು ನಯನ

ಮಾಗಿದ ಮನಸಿನ ಸೊಬಗು

ಬಿಡಿಸಿದ ಗೆರೆಗಳು ಬೇರೆಗು


ಬದುಕು ಬದಲಿಸಿದ ಬಣ್ಣ

ತನುವ ಕದಡಿದ ಬಿಳಿ ಸುಣ್ಣ

ನಗುವ ನಯನದ ಕಣ್ಣ

ನಾನೆಗೆ ಮರೆಯಲಿ ಇನ್ನ 


ನನ್ನವಳು ನಕ್ಕಾಗ ಸೊಗಸು

ಯಾಕೋ ಬಿದೈತೆ ಕನಸು

ಚಂದ್ರನೇ ತಿರುಗಿ ನೀ ಚಲಿಸು

ಪ್ರೀತಿಯ ನೆನಪು ಸುಟ್ಟಿದೆ ವಯಸು


ಹೇಳಲೋರೇಟೇ ಕೊನೆ ಮಾತು

ನನ್ನ ಹೃದಯದ ಕಥೆಯ ಮರೆತು

ನನ್ನ ಪ್ರೀತಿಯ ಒಲವು ಬೆರೆತು

ನಗುನಗುತಾ ಕಾಲವ ದೂಡುವುದೇ ಒಳಿತು



*******ರಚನೆ **********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ನೋವು ತುಂಬಿ

ಹಣತೆ ಆಳುತಿದೆ

Author biography of Chandrashekhar Channapura Halappa