Posts

Showing posts from August, 2021

ನಮ್ಮ ಸ್ವಾತಂತ್ರ್ಯ

Image
ಸ್ವಾತಂತ್ರ್ಯ  ಆಳಿದ ದೊರೆಗಳು ಹಳಿದ ಮೇಲೆ ಬಂದಿತು ನಮಗೆ ಸ್ವಾತಂತ್ರ್ಯ ಕೆಚ್ಚೆದೆಯ ವೀರರು ಸುರಿಸಿದ ರಕ್ತಕೆ ಬಂದ ಸ್ವಾತಂತ್ರ್ಯ ಶಾಂತಿಯ ಮಂತ್ರ ಪಟಿಸಿದ ನಮಗೆ ಸಿಕ್ಕ ಸ್ವಾತಂತ್ರ್ಯ ಇಂಗ್ಲೀಷರು ದೇಶ ಬಿಟ್ಟ ಮೇಲೆ ಒಲಿದಿದೆ ನಮಗೆ ಸ್ವಾತಂತ್ರ್ಯ ಅದುವೇ 1947 ನೇ ಆಗಸ್ಟ್15ರ  ಸ್ವಾತಂತ್ರ್ಯ ಧರ್ಮಗಳು ಬೇರೆ ದೇವರುಗಳು ಬೇರೆ ನಾವೆಲ್ಲಾ ಒಂದೇ ಎಂದು ಜೀವಿಸುತ್ತಿರುವ ಸ್ವಾತಂತ್ರ್ಯ ಜಾತಿಗಳು ನೂರು ಬಾಷೆಗಳ ತವರು ಇದ್ದರು ಇಲ್ಲಿ ಸಮಾನತೆಯ ಸ್ವಾತಂತ್ರ್ಯ ಸಿರಿತನವಿದ್ದರೂ ಬಡತನ ಬಂದರು ಕಲೆತು ಬೆರೆಯುವ ಸ್ವಾತಂತ್ರ್ಯ ಮೇಲು ಕೀಳು ನಮ್ಮಯ ಗೋಳು ಮರೆತು ಕುಣಿಯುವ ಸ್ವಾತಂತ್ರ್ಯ ಅಜ್ಞಾನವ ಅಳಿಸಿ ವಿಜ್ಞಾನವ ಬೆಳೆಸಿ  ಪರಿಸರ ಉಳಿಸಿ ಯುವಜನತೆಯ ಸುಂದರ ಸ್ವಾತಂತ್ರ್ಯ ದೇಶದ ಯುಕ್ತಿ ಸೈನಿಕನ ಶಕ್ತಿ ಮುನ್ನೆಡಿಸಿ ನಲಿಯುತಿಹಾ ಸ್ವಾತಂತ್ರ್ಯ ರೈತನು ಶ್ರಮಿಸುತ ಅನ್ನವ ನೀಡುತಾ ಕಾರ್ಮಿಕ ದುಡಿಯುತ ಜೀವನವ ಸಾವೇಸುತ ಚಲದಲಿ ಬದುಕುವ ಸ್ವಾತಂತ್ರ್ಯ  ದೇಶದ ಹೆಸರು ಬಾಹ್ಯಕಾಶದಲ್ಲಿ ರಂಜಿಸುತ್ತಿರುವ ಸ್ವಾತಂತ್ರ್ಯ ಸಾಗಿದೆ ನಮ್ಮ ಅಂದ ಚೆಂದದ 75 ರ ಭಾರತ ಸ್ವಾತಂತ್ರ್ಯ. *******ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಹುಡುಗ ನೀನು

Image
ಹುಡುಗ ನೀನು  ದಾರಿಯಲೇ ನಾ ಕಂಡೆ ಒಬ್ಬ ಹುಡುಗ ನಡೆದಾನೆ ಇವನು ಕೊನೆಯ ತನಕ ಮನದಲ್ಲಿ ನೊಂದು ಕನಸನ್ನು ಕೊಂದು ಒಲವಲ್ಲಿ ಮಿಂದು ದಡದಿ ಬೆಂದು  ಮನಸ್ಸಲಿ ಭಾರ  ಹೊತ್ತು ನಡೆದ ದೂರ ಸುಂದರ ಹುಡುಗಿಯು ಕೊಟ್ಟ ನೋವಿನ ತೀರ ಕಡಲ್ಲಲ್ಲಿ ಬಂದು ನೋವಲ್ಲಿ ಮಿಂದು ಮನಸಿನ ಆಸೆಯ ಹೊಡಲಲ್ಲಿ ಕೊಂದು ಹುಟ್ಟಿತು ಅಸೆ ನೀನ್ನನ್ನು ನೋಡುವ ಮನಸೇ ನೋಡಿದಾಗ ಏಕೋ ಸುಂದರ ಕನಸೇ ನೀ ಹೇಳಿದ ಮೇಲೆ ಸುಂದರ ಕಡಲೆ  ಮರೆಯುವ ಮುಂಚೆ ಸುಂದರ ಒಡಲೇ ನೋವೋಲ್ಲಿ ಕೂಡ ತೀರದ ಬಯಕೆ ಕಂಡ ಕನಸಿಗೆ ಸೋಲಿನ ಅರಕೆ ಸಾವಲ್ಲೂ ಕೂಡ ಸೇರುವ ಕನಸೇ ನನ್ನಯ ಮನಸಿಗೆ ನಿನ್ನಯ ಸೊಗಸೆ ಪ್ರೀತಿಯ ಅಸೆ ಹೇಳಲು ಹೊರಟೆ ನನ್ನಯ ಪ್ರೀತಿಯು ಸುಂದರ ಅರಟೆ ಪ್ರೇಮದಿ ಅರಳಿದ ಸುಂದರ ಕವನ ನಿನಗಾಗಿ ಸೋತಿದೆ ನನ್ನ ಈ ನಯನ ****†****ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಕೆರೆ ತುಂಬಿ ಬಂತು

Image
ಮದಗದ ಕೆರೆ  ಕೆರೆಯನ್ನು ನೋಡಿ       ಕುಣಿದಾಡುವಾಸೆ ನಿನ್ನನ್ನು ಕಂಡು       ಕುಣಿಯಿತು ಮನಸೇ ಕೆರೆ ಏರಿ ಮೇಲೆ ಬಂದವಳೇ      ನೀರನ್ನು ಕಂಡು ನಿಂತಾವಳೇ ನೀರಲ್ಲಿ ಮಿಂದು       ನನ್ನನ್ನು ಕಂಡು ನಕ್ಕವಳೆ ನೀನ್ನನ್ನು ನೋಡಿ ಸೊಬಗನ್ನು ಬೇಡಿ           ಹಸಿರುಟ್ಟು ಮೈತುಂಬಾ ನಿಂತಾವಳೇ ನನ್ನಾಸೆ ನೀನು ಕನಸೆಲ್ಲ ಜೇನು         ಹಾಲಜೇನಿನಂತೆ ಕಂಡವಳೇ ನೀನು ತುಂಬಾ ಕೆಂಪು         ಮುಖವೆಲ್ಲಾ ಬಿಳಿಪು ನೋಡುಲು ಸೋಂಪು        ನೀ ಹರಿದ ಕಂಪು ಜಾರುತ್ತಾ ಕೆರೆ ಏರಿ                 ಹರಿದವಳೇ ಕಾಲುವೆಯಲಿ ಹರಿದು                ಒಲವೆಲ್ಲ ತೋಯ್ದು ಮನದಲ್ಲಿ ಹಸಿರು                ನೀನುಟ್ಟ್ ಪಸಿರು ಪ್ರೀತಿಯ ಹೆಸರು                ಜೀವದ ಉಸಿರು ನನ್ನನ್ನು ಕೊಚ್ಚಿ ಮನದಲಿ                  ಚಚ್ಚಿ ನಡೆದವಳೇ ಪ್ರೀತಿಯಲಿ ಕಚ್ಚಿ ಹಸಿರುನು                   ಬಿತ್ತಿ ಹೋರಾಟವಳೇ ಮದಗದ ಕೆರೆಯಲ್ಲಿ                 ನೊರೆ ಹಾಲಿನಂತೆ ನನ್ನನ್ನು ನೋಡಿ ಕಣ್ಣನ್ನು                ತಿರುಗಿಸಿ   ನಕ್ಕವಳೇ  ********ರಚನೆ ********** ಡಾ. ಚಂದ್ರಶೇಖರ. ಸಿ. ಹೆಚ್