Posts

Showing posts from March, 2026

ನೋವು ತುಂಬಿ

Image
  ಭಾವದಲ್ಲಿ ನೋವು ತುಂಬಿ  ಹಾಡನ್ನು ಹೇಗೆ ಹಾಡಲಿ ಕಣ್ಣ ಹನಿಯ ಭೂಮಿ ತಾಗಿ  ಕೊಟ್ಟ ನೋವಾ ಹೇಗೆ ಮರೆಯಲಿ  ಹೃದಯ ವೀಣೆ ಮಿಡಿಯುತ್ತಿದೆ  ನಿನ್ನ ಪ್ರೀತಿ ನೆನಪಲಿ  ರಕ್ತವೆಕೋ ಕುದಿಯುತ್ತಿದೆ  ನಿನ್ನ ಮೋಸದ ಬಲೆಯಲಿ  ಹುಡುಕಿ ಹುಡುಕಿ ಸೋತೆ  ಕನಸ್ಸುಗಳ ನೆನಪನು  ಕದವ ತಟ್ಟಿ ಕೂಗಿ ಕರೆದೆ  ತಿರುಗಿ ಏಕೋ ಮತ್ತೆ ಬಾರದೇ  ಶೋಕವೇಕೋ ತುಂಬಿದೆ  ಭಾವನೆಗಳ ಬಯಕೆ ಗೂಡಲಿ  ನೋವು ಏಕೋ ಕಾಡಿದೆ  ಈ ಹುಣ್ಣು ಹಣ್ಣಿನ ದೇಹದಲಿ  ಚಿಗುರಿತೆಗೆ ಪ್ರೀತೀ ಕಡಲು  ಬದುಕು ಬಿರಿವ ಸಮುದ್ರದಿ  ಜೀವನವ ನಡೆಸಲೆಗೆ ನಾನು ನಾವಿಕನಿಲ್ಲದ ಹಡಗಲಿ  ಮನವು ಮೂಕವಾಗಿ ಆಸೆಗಳ  ಗೂಡಿಗೆ ಬೆಂಕಿ ಬಿದ್ದಿದೆ  ಹೊತ್ತ ಕನಸುಗಳು ಸುಟ್ಟಿದೆ  ತಂಪಲೆಗೆ ನಾನು ಹೆದ್ದಲಿ  *********ರಚನೆ********* ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಹಣತೆ ಆಳುತಿದೆ

Image
  ಬೆಳಕು ನೀಡುವ ಮುನ್ನವೇ ಒತ್ತಿದ ಹಣತೆ ಹಾರಿದೆ  ಹೊತ್ತ ಕನಸುಗಳ ಕತ್ತಲೆ ಮಸಣಕ್ಕೆ ಹಾಗೆ ತಳ್ಳಿದೆ  ಮತ್ತೆ ಹಣತೆ ಬೆಳಗಲು ಯಾರು ಹಚ್ಚಬೇಕು ಬೆಂಕಿ  ಕೋಣೆ ಒಳಗಡೆ ಮೌನದ ಸೂತಕದ ಛಾಯೆ  ಅವಳ ನೆನೆದು ಕಣ್ಣೀರು ಸಮುದ್ರದಿ ಬತ್ತಿದೆ  ಹೃದಯದ ಒಳಗೆ ರಕ್ತ ಕೆಂಪಾಗಿ ಕುದಿದೀದೆ  ಮನಕೆ ಏಕೋ ಕರ್ಮೋಡದ ಸಿಡಿಲು ಬಡಿದಿದೆ  ಮಳೆ ಬಂದೀತೆ ಮಿಂಚಿನ ಸಂಚಿನ ಸೆಳೆತಕೆ  ಸುನಾಮಿ ಎದ್ದಿತೆ ಅಲೆಗಳ ಸಿಟ್ಟಿನ ಒಡೆತಕೆ  ದಡವು ಕೊಚ್ಚಿತೆ ನೀರಿನ ರಭಸದ ಆ ಸೆಳೆತಕೇ  ಯಾರೋ ಗೀಚಿದ ಹಣೆಬರಹಕ್ಕೆ ನೋವು ಬಂದಿದೆ  ತನ್ನನ್ನು ತಾನೇ ಶಪಿಸಿ ವಿದೀಬರಹ ಅಳುತಿದೆ  ಇಬ್ಬನಿಯ ಹನಿ ಮುತ್ತು ಕೆದಕಿದೆ ಈ ಜಗವ  ಕಾಣದಾ ಬೆಳಕೊಂದು ಈಣುಕಿ ನೋಡಿದೆ ಈ ಯುಗವ  **********ರಚನೆ**********  ಡಾ. ಚಂದ್ರಶೇಖರ್ ಚನ್ನಾ ಪುರ ಹಾಲಪ್ಪ