ಮಕ್ಕಳ ಗೀತೆ -15

 



🌹ನಮ್ಮೂರ ಸಂತೆ 🌹

ಸಂತೆಗೆ ಹೊರಟನು ಶಾಮಣ್ಣ 

ಕೈಯಲ್ಲಿ ಹಿಡಿದನು ಬ್ಯಾಗನ್ನು 

ಹತ್ತಿದ ಬುಲೆಟ್ಟು ಬೈಕನ್ನು 

ಮಾಡಿದ ಬುಡು ಬುಡು ಸೌಂಡನ್ನು 


ಕೊಳ್ಳಲು ಹೊರಟನು ತರಕಾರಿ 

ಕೊಡಲು ಸಿದ್ದ ವ್ಯಾಪಾರಿ 

ಮೂಲಂಗಿ, ಬದನೆ, ಮೆಣಸು 

ಕ್ಯಾರೆಟ್, ಬೀಟ್ರೂಟ್, ಆಲೂಗೆಡ್ಡೆ 


ಯಾವ ತರಕಾರಿ ಕೊಂಡರು ಇಪ್ಪತ್ತು 

ತುಂಬಿದ ಚೀಲವ ಕೊಟ್ಟು ನೂರೈವತ್ತು 

ಕೊಂಡನು ಸಂತೆಯಲ್ಲಿ ಕಾರ ಮಂಡಕ್ಕಿ 

ಬೈಕಲ್ಲಿ ಬಿಗಿದನು ಚೀಲವ ನೂಕಿ


ಸಂತೆಯ ಬಿಟ್ಟು ಹೊರಟ ಶಾಮಣ್ಣ  

ಕೇರಿಯ ಬೀದಿಯಲ್ಲಿ ಸಿಕ್ಕ ರಾಮಣ್ಣ 

ಊರ ಸಂತೆಯು ಮುಗಿದಾಯ್ತು 

ಶಾಮಣ್ಣ ಮನೆಯ ಸೇರಾಯ್ತು 


***********ರಚನೆ*********

ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

Comments

Popular posts from this blog

ನೋವು ತುಂಬಿ

ಹಣತೆ ಆಳುತಿದೆ

Author biography of Chandrashekhar Channapura Halappa