Posts

Showing posts from October, 2024

ಶಿಶು ಗೀತೆ

Image
  🌹ಹಾರುತ್ತಿರುವ ಹಕ್ಕಿ 🌹 ಹಾರುತಿರುವ ಹಕ್ಕಿಯೇ ನೋಡುಬಾರೆ  ನನ್ನ ಕಂದಮ್ಮ ಅಳುತವಳೇ ಕೇಳುಬಾರೆ  ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ತೆವಳುತವಳೇ  ಕಾಲಿನಲ್ಲಿ ಗೆಜ್ಜೆ ತೊಟ್ಟು ಸದ್ದು ಮಾಡುತವಳೇ  ಮೊಗದಲಿ ಏಕೋ ಕೋಪ ತೋರುತವಳೇ ಸುಮ್ನೆ ನನಗೆ ಏಕೋ ಒಡೆಯುತವಳೇ ಒಮ್ಮೆ ಮೊಗದಲ್ಲಿ ನಗೆ ತೋರುತವಳೆ ಕುಡಿ ನೋಟ ಬೀರಿ ಕೇಕೆ ಹಾಕುತವಳೇ ಹಾರುತ್ತಿರುವ ಹಕ್ಕಿಯೇ ನೋಡು ಬಾರೆ  ನನ್ನ ಕಂದಮ್ಮ ಅಳುತಿಹಳು ಕೇಳುಬಾರೆ ಗುಬ್ಬಿಯಂಗೆ ಒಮ್ಮೆ ಮಾತ ಆಡುತವಳೇ ನನ್ನ ನೋಡಿ ಸಿಟ್ಟಿನಲ್ಲಿ ಪರಚುತವಳೇ ಮಳೆರಾಯ ಬಂದವನೇ ನಮ್ಮ ಊರಿಗೆ ದಾರಿಯಲಿ ಏಕೋ ಕೆಸರು ನಮ್ಮ ಬೀದೀಲಿ ಕಂದಮ್ಮ ನೀರು ನೋಡಿ ಕುಣಿಯುತವಳೇ ಬಟ್ಟೆಯೆಲ್ಲಾ ಒದ್ದೆ ಯಾಗಿ ಚಿರುತವಳೆ ಹಾರುತ್ತಿರುವ ಹಕ್ಕಿಯೇ ನೋಡು ಬಾರೇ ಕಂದಮ್ಮ ಅಳುತವಳೆ ಕೇಳು ಬಾರೆ ಪ್ರೀತಿಯಲ್ಲಿ ಚಿಲಿಪಿಲಿ ಎನ್ನುಬಾರೆ ನನ್ನ ಕಂದಮ್ಮನ ಒಮ್ಮೆ ನೀನು ನಗಿಸುಬಾರೆ  ***********ರಚನೆ******** ಡಾ. ಚಂದ್ರಶೇಖರ್ ಸಿ.ಹೆಚ್

ದಾಸಗ್ರಿವ

Image
  ಬರೆಯದೇ ಕರಗಿದ ಕಥೆಗೆ  ಆಯುಧ ಪೂಜೆಯ ನೆನಪು ರಾಮನು ಪಟ್ಟ ವ್ಯಥೆಯ  ಕಾಡಿದೆ ಕಾಡಿನ ನೆನಪು ಸೀತೆಯ ಕನಸಿಗೆ ರಾವಣ  ಅದನೆ ಸುಮ್ಮನೇ ಬಿರುಕು ಆಯುಧ ಪೂಜೆಯ ದಿನವೂ  ಸುಡುವರು ರಾವಣನ ತಲೆಯ ನರ ರಾಕ್ಷಸರು ಇಲ್ಲಿ ಹಾಕಿಹರು ಸುಂದರ ಪ್ರೀತಿಯು ಬಲೆಯ ದಿನವೂ ನಡೆವ ರಾಮಾಯಣ ಕೇಳುವರು ಯಾರು ಇಲ್ಲಿ ಸುಡುವ ಪ್ರೀತಿಯ ಬೆಂಕಿಯ ಬಲೆಗೆ  ಸುಟ್ಟಿಹರು ಅಮಾಯಕರು ತಮ್ಮ ಉಸಿರನು ಚೆಲ್ಲಿ ಬರೆಯುವೇನೆ ನಾನು ಕಥೆಯ ಹೇಳುವೇನೆ ಪ್ರೀತಿಯ ಒಲವ ಸಹಿಯ *********ರಚನೆ******* ಡಾ. ಚಂದ್ರಶೇಖರ್ ಸಿ. ಹೆಚ್

ಚುಟುಕು ಕವನ-33

Image
           🌹ನಗು🌹 ನಗುವಿನ ಮೊಗದ ಅಪ್ಸರೆಯೆ ನೋಟದಿ ಕಾಡಿದ ಸುಂದರಿಯೆ ಬಿಡದೆ ಕಾಡುವ ಮೋಹಿನಿಯೇ ಪ್ರೀತಿಯಾ ನನ್ನಾ ಕಿನ್ನರಿಯೇ       🌹 ಮುಗುಳ್ನಗೆ 🌹 ಬಾನಲ್ಲಿ ಚಂದ್ರ ಮುಗುಳ  ನಗುತಿದೆ  ನಕ್ಷತ್ರಗಳು ನಾಚಿ ಮೀನುಗುತಿದೆ      ಹಾರಾಡುವ ಹಕ್ಕಿಯೊಂದು ಕೂಗಿದೆ ಚಂದ್ರನಿಗೆ ಮುತ್ತಿಡಲೆ ನಾ ಏನುತಿದೆ  🌹 ಮಂದಹಾಸ 🌹 ಚೆಲುವೆ ನಿನ್ನ ಮೊಗದಿ ಮಂದಹಾಸ ಕವಿಯು ಕೂಡ ಅರಿಯಾದದ ಪದದ ಪ್ರಾಸ ನಿನ್ನ ನೋಡಿ ನಕ್ಕನಂತೆ ಕಾಳಿದಾಸ ಆಷಾಢ ಮುಗಿದು ಬಂತಂತೆ ಶ್ರಾವಣಮಾಸ *********ರಚನೆ******** ಡಾ. ಚಂದ್ರಶೇಖರ್ ಸಿ ಹೆಚ್