ಶಿಶು ಗೀತೆ
🌹ಗುಮ್ಮಾ ನೋಡಮ್ಮ 🌹 ನನ್ನಯ ಮುದ್ದು ಕಂದಮ್ಮ ಗುಮ್ಮ ಬಂದಿಹ ನೋಡಮ್ಮ ಪ್ರೀತಿಯಲಿ ನಿನ್ನಾ ಕರೆದಿಹನು ಕಾಣದಾ ಹಾಗೆ ಅವಿತಿಹನು ನೀನು ಅತ್ತರೆ ಸುಮ್ಮನೆ ಅವನಿಗೆ ಕೊಡುವೇ ನಿನ್ನನೇ ಯಾಕೀ ನಿನ್ನಯ ರಂಪಾಟ ಅತ್ತು ಕರೆದು ಚೀರಾಟ ನಾನು ನಿನ್ನಾ ಪ್ರೀತಿಯ ಅಮ್ಮ ನಗುತ ಆಡು ಬಾರೆ ಚಿನ್ನಮ್ಮ ಅಕಾಶದಿ ಚಂದಿರ ಬಂದಿಹನು ನಿನ್ನನು ಕೂಗುತಾ ಕರೆದಿಹನೂ ಕಂದಾ ನೋಡಿದಳು ಆಕಾಶ ಉಕ್ಕಿ ಬಂದಿತು ಸಂತೋಷ ಬೆಳ್ಳನೆ ಶಶಿಯನು ನೋಡಿ ಹಾಲನು ಕುಡಿದಳು ಅಮ್ಮನ ಕೂಡಿ ಅಮ್ಮನ ಖುಷಿಗೆ ಪಾರವೇ ಇಲ್ಲ ಮರೆತಳು ತನ್ನಾ ನೋವೆಲ್ಲಾ ಕಂದನ ತೊಳಲಿ ತಬ್ಬಿಹಳು ಕೆನ್ನೆಗೆ ಮುತ್ತು ಕೋಟ್ಟಿಹಳು ಕಂದನಿಗೆ ತೊಟ್ಟಿಲು ಕಟ್ಟಿಹಳು ಮಲಗಿಸಿ ಜೋಗುಳ ಹಾಡಿಹಳು ಕಂದಾ ನಿದ್ದೆಯ ಮಾಡಿರಲು ಅಮ್ಮಾ ಮನೆ ಕೆಲಸ ಮಾಡಿದಳು **********ರಚನೆ********** ಡಾ. ಚಂದ್ರಶೇಖರ ಸಿ.ಹೆಚ್