ಹೂವು ನೀನು
ನನ್ನ ಎದೆಯ ಅರಮನೆಯ
ಹೂವು ನೀನು
ಕನಸಿನಲಿ ಕಾಡಿದ ಮುದ್ದು
ರತ್ನವೆ ನೀನು
ಸಾಗರದ ಅಲೆಯಂತೆ
ಬಳುಕುವ ಕುಸುಮವೇ
ದಡದಲ್ಲಿ ನಾಚಿ ನಿಲ್ಲುವ
ಸೊಗಸ ಸೌಂದರ್ಯವೇ
ನೂರೆಂಟು ಆಸೆ ಹೊತ್ತು
ನಿನ್ನ ನಾ ಕೂಗಿದೆ
ಹಗಲಲ್ಲಿ ಕನಸು ಬಂದು
ನೀನು ನನ್ನಾ ಕಾಡಿದೆ
ಸೆರೆಯಾದ ಹೃದಯಕ್ಕೆ ನೀನು
ತಾನೇ ಸೋಜಿಗ
ಮರೆಯಾಗದ ನೆನೆಪುಗಳಿಗೆ
ನೀನು ಗೀಜಗ
ಕಥೆಯಲ್ಲಿ ಸುಂದರ ಕವಿತೆ
ಹೇಗೆ ಕಟ್ಟಲಿ
ಕವಿತೆಯ ಸಾಲುಗಳಲಿ ನಿನ್ನಾ
ಹೇಗೆ ತಲುಪಲಿ
ಮನದಿ ಬಂದ ಪದಗಳನ್ನು
ಭಾವಗೀತೆ ಮಾಡಲಿ
ಏಳು ಸ್ವರದ ಸಂಗೀತವ
ಹೇಗೆ ನಾ ನುಡಿಸಲಿ
ಬಾಡಿದ ಹೂವೊಂದು
ಬದುಕನ್ನು ಕೇಳಿದೆ
ಕಣ್ಣ ಹನಿಯು ಕಂಬನಿ ಹಾಗಿ
ಜೋಗದಂತೆ ದುಮುಕಿದೆ
ಬಯಕೆಗಳು ಜೀವನವನ್ನು
ಬೇಕು ಎಂದು ಬೇಡಿವೆ
ಯಾರು ಕಾಯಬೇಕು ಹೀಗಾ
ಆಸೆಗಳು ಸೋತಿವೆ
**********ರಚನೆ********
ಡಾ.ಚಂದ್ರಶೇಖರ್ ಸಿ.ಹೆಚ್
ಅದ್ಭುತ ಸರ್ 💐
ReplyDeleteNICE LINES SR
ReplyDelete