Posts

Showing posts from May, 2024

ನೆನಪಿನ ಪಯಣ

Image
  ಮೌನದ ಮಾತುಗಳ ಪಯಣದ ಮೂಕ ನೆನಪು ಕಂಡ ಕನಸುಗಳ ಸವಿ ಪ್ರೀತಿಯ ಮರಣದ ನೆನಪು ಕಣ್ಣ ರೆಪ್ಪೆಯಲ್ಲಿ ಒಲವಿನ ಕಣ್ಣೀರ ಹನಿ ನೆನಪು ಗೆದ್ದು ಸೋತ ಬದುಕಿನ ನಗುವೆ ಕಾರಣ ಓ ನೆನಪು ನೂರೆಂಟು ಬಯಕೆಗಳ ಹದಿಹರೆಯದ ಸುಂದರ ನೆನಪು ಬಾಣವ ಬಿಟ್ಟಂತೆ ಮನಸ್ಸಿಗೆ ತಾಕಿದ ಸಿಹಿ ನೆನಪು ಒಡೆದ ತುಟಿಗಳ ಗೆರೆಗಳ ಮಾಸಿದ ಕಹಿ ನೆನಪು ಹೃದಯವ ಹಿರಿದು ಕೊಂದಂತೆ ಕಾಡುವ ಮೋಸದ ನೆನಪು ಸತ್ಯ ಮಿತ್ಯಗಳ ಸವಿ ಕನಸಿನ ಲೋಕದ ಸೃಷ್ಟಿಯ  ನೆನಪು ಬದುಕಿನ ಸಂಗತಿಯಲ್ಲಿ ಬಾಡಿದ ಮಲ್ಲಿಗೆಯ ನೆನಪು ಆಸೆಗಳ ಊರಿನಲ್ಲಿ ಮುಖ ತೋರಿ ನಿಂತ ನೆನಪು ಬೆನ್ನಿಗೆ ಚೂರಿ ಹಾಕದಿರು ಓ ಸುಂದರ ಜೊತೆಗಾತಿ  ನೆನಪು **********ರಚನೆ********* ಡಾ. ಚಂದ್ರಶೇಖರ್ ಸಿ.ಹೆ ಚ್

ಪ್ರೇಮೋತ್ಸವ

Image
  ಸಹ್ಯಾದ್ರಿ ನಿಸರ್ಗ ಕಂಡು  ಕುಣಿದಿದೆ ಇಂದು ಮನವು ಜೋಗದ ನದಿ ಜಿಗಿತ ಕಂಡು ಅರಳಿದೆ ಇಂದು ತನುವು ಹಸಿರು ಹರಿದ್ವರ್ಣ ಗಂಧದ ಗುಡಿ ಸಹಬಾಳ್ವೆಯ ನಿತ್ಯ ನುಡಿ ಪ್ರೇಮೋತ್ಸವ ಪ್ರಕೃತಿ ಪ್ರೇಮೋತ್ಸವ ಮತ್ತೆ ಪ್ರೇಮೋತ್ಸವ......... ಶಿಲ್ಪಗಳ ಇತಿಹಾಸ ಕಂಡು ಶೃಂಗೇರಿಯ ಶಾರದೆಗೆ ನಮಿಸಿ ದೈವಗಳ ನಾಡು ನುಡಿ ಕನ್ನಡದ ಸವಿಯ ನುಡಿ ಪ್ರೇಮೋತ್ಸವ ಪ್ರಕೃತಿ ಪ್ರೇಮೋತ್ಸವ ಮತ್ತೆ ಪ್ರೇಮೋತ್ಸವ......... ಜಾತಿ ನೀತಿಗಳ ಮೆಟ್ಟಿ ಹಿರಿಮೆ ಗರಿಮೆ ಕುಲವ ತಟ್ಟಿ ಲೋಕವೆಂಬ ಬೆಳಕಿನಲ್ಲಿ ಬದುಕು ಆಸೆ ಹಸಿರಿನಂತೆ ಚಿಗುರಿದೆ ಪ್ರಣಯವೆಂಬ ಜೀವನದಲ್ಲಿ ಹೃದಯ ನಕ್ಕು ನಲಿದಿದೆ ಪ್ರೇಮೋತ್ಸವ ಪ್ರಕೃತಿ ಪ್ರೇಮೋತ್ಸವ ಮತ್ತೆ ಪ್ರೇಮೋತ್ಸವ......... *********ರಚನೆ******* ಡಾ. ಚಂದ್ರಶೇಖರ್ ಸಿ.ಹೆಚ್