ನೀ ದೂರವೇೇಕೆ
ಸನಿಹ ನೀನಿದ್ದರೂ ನೀ ದೂರವೇೇಕೆ
ಚಿಂತೆ ನೂರಿದ್ದರು ನೀ ಮೌನವೆಕೆ
ಮನದಲಿ ನೋವಿದ್ದರೂ ಸಹಿಸಬೇಕೆ
ಕೊಳಕು ಬದುಕಿಗೆ ಮೆತ್ತಿದ್ದರು ಬಾಳಬೇಕೆ
ಎದೆಯಾ ಒಳಗೆ ಒತ್ತಿದ ಹಣತೆ ಬೆಳಕು ಚೆಲ್ಲಿದೆ
ನಾಲ್ಕು ಗೋಡೆ ಮಧ್ಯೆ ಕೂತು ಹಣತೆ ಅಳುತಿದೆ
ಯಾರಿಗೆ ಈ ಬೆಳಕು ಎಂದು ಜೀವ ಕೇಳಿದೆ
ಫೋಟೋಗೇ ಗೋಡೆಯಲ್ಲಿ ಹಾರ ಹಾಕಿದೆ
ನೋವಿನ. ನೊಗವ ಹೊತ್ತು ಜೀವ ಕುಸಿದಿದೆ
ಉಸಿರಲ್ಲಿ ಉಸಿರನ್ನು ಬಿಡುತ್ತಾ ಜೀವ ಬೆಂದಿದೆ
ಎಳೆಯಲು ಯಾರು ಇಲ್ಲ ಬಾಳ ಬಂಡಿಯ
ಬದುಕ ಗಾಳಿಯು ಆಗಿದೆ ಬಿರುಗಾಳಿಯು
ಕುಂಟುತ ಸಾಗಿದೆ ಬಾಳಿನ ಒಲವ ಪಯಣ
ಯಾರೋ ಕುತ್ತಿಗೆ ಕೊಯ್ದಂಗೆ ಈ ಮರಣ
ಏಳು ಬೀಳಿನ ಜೀವನದಲ್ಲಿ ಯಾರೂ ಇಲ್ಲ
ಬಾಳ ಸಂತೆಯು ಏಕೋ ಖಾಲಿ ಆಗಿದೆಯಲ್ಲ
ದಿನವೂ ಮಾಡಬೇಕು ನಾವು ಇಲ್ಲಿ ಕೂಲಿ
ಆಡಿಸುವಾತನ ಆಟದಲ್ಲಿ ನಾವು ಖಾಲಿ
ಮೇಲೆ ನಿಂತು ನೋಡುತವನೇ ಆ ಸೂತ್ರಧಾರಿ
ಕೆಲಸ ಮುಗಿಸಿ ಹೊರಡೋ ನಗುತಾ ನೀ ಪಾತ್ರದಾರಿ
**********ರಚನೆ*********
ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

Comments
Post a Comment