ಹೂವು ನಗುತಿದೆ
ದಾರಿ ಕಾಣದ ಕಾಡಲ್ಲಿ ಗಿಡದಿ
ಹೂವು ಒಂದು ಅರಳಿದೆ
ಕಣ್ಣ ನೀರು ಹೊತ್ತು
ಗಿಡವು ದಾರಿಯಲಿ ಕುಸಿದು ಬಿದ್ದಿದೆ
ಮಳೆಯೂ ಗುಡುಗಿ ಬಂದು
ಗಿಡಕ್ಕೆ ನೀರನ್ನು ಕುಡಿಸಿದೆ
ಬೆನ್ನು ಮುರಿದ ಗಿಡವು
ಮತ್ತೆ ಎದ್ದು ನಿಂತಿದೆ
ಮೂರು ಪದದಲಿ ಬೆರತ ಕವನ
ಕಥೆಯ ಒಮ್ಮೆ ಹೇಳಿದೆ
ಗಿಡದ ವ್ಯಥೆಯ ಮೆಲುಕು ಹಾಕಿ
ಕಾಲ ಉತ್ತರ ಹೇಳಿದೆ
ಕವಿಗೆ ನಿಲುಕದ ಪದಗಳ
ಹೂವು ಕವನದಿ ಅರಳಿದೆ
ಜೀವಕ್ಕೆ ನೀರು ಕೊಟ್ಟ
ಮೋಡಕ್ಕೆ ಕೈಯ ಮುಗಿದಿದೆ
ಹನಿಯ ನೀರು ಕಲೆತ ಹೂವು
ಬಾಡದೆ ನಗುತಾ ನಿಂತಿದೆ
ಕಣ್ಣ ನೋಟ ಹೂವ ನೋಡಿ
ಮನಸ್ಸು ಏಕೋ ಮಿಡಿದಿದೆ
.jpeg)
Comments
Post a Comment