Posts

Showing posts from November, 2024

ಚುಟುಕು ಕವನ-40

Image
       🌹 ಅನುರಾಗ 🌹 ಈ ಬಾಳಿನಲ್ಲಿ ಸುಂದರ ಅನುರಾಗ ನಿನ್ನ ನೆನೆಯುವುದೇ ಪ್ರೀತಿಯ ಸುಯೋಗ ಬಳಿ ಬರೆ ನಲ್ಲೆ ಇರದೇ ಯಾವುದೇ ರೋಗ ಕೇಳುವೇನು ನಿನ್ನ ನಾನು ಕನಸಿನಲಿ ಭಾಗ                   🌹 ಪ್ರೇಮ 🌹 ಪ್ರೀತಿ ಪ್ರೇಮವನ್ನು ನಂಬೇನು ನಾನು ಕೈ ಹಿಡಿದ ಮೇಲೆ ಬಿಡೆನು ಇನ್ನು ಮೋಸವನ್ನು ಮಾಡಬೇಡ ನೀನು ನನಗೆ  ದೈವವು ಕಾಪಾಡುವ ನಮ್ಮನು ಕೊನೆಗೆ         🌹 ಪ್ರಣಯ 🌹 ನೋಡು ನಲ್ಲೆ ಪ್ರಣಯವು ಸುಂದರ ಯಾಮಾರಿದರೆ ನಾವು ಅದುವೇ ಕಂದರ ವಯಸ್ಸು ಇಗೆ ನೋಡು ಬಣ್ಣದ ವೇಷ ಜಾರಿದರೆ ನಾವು ಕುಡಿದ ಹಾಗೆ ವಿಷಪ್ರಾಷ ********ರಚನೆ*********  ಡಾ.ಚಂದ್ರಶೇಖರ್ ಸಿ.ಹೆಚ್