ಬದುಕು ನೊಂದು

 




ಬದುಕಿನ ನಡೆಯಲ್ಲಿ ಬರಿದಾಯ್ತು ಜೀವನ

ಕಾಣದ ಕನಸ್ಸುಗಳ ನೇನೆದಾಯ್ತು ಈ ಮನ

ನೆನ್ನೆಯ ನೆನಪುಗಳು ಕಾಡುತ್ತಿವೆ ನೂರು

ನುಚ್ಚು ನೂರಾಗಿದೆ ಹೃದಯ ಒಂಚೂರು


 ನೋವಿನ ನೆಪದಲ್ಲಿ ಮನಸಿನ ಸಂಚಲನ

ರೆಪ್ಪೆಯಲು ನಗುತ ಕಣ್ಣೀರ ಆಗಮನ

ಬೇಕು ಬೇಡಗಳು ಬದುಕ ಹಿಂಡಿವೆ 

ಸಂತೆಯಲಿ ಆಸೆಗಳು ಮಸಣ ಸೇರಿವೆ


ಏನ್ನ ಒಡಲು ಹಸಿದು ಬಯಕೆಗಳು ಬರಿದು

ಬಾಯಿ ಬಿಟ್ಟ ಭೂಮಿ ಅಗಸವ ಕರೆದು

ಬರದ ಭೂಮಿಯಲ್ಲಿ ಬಿಸಿಲ ಮಳೆ ಮೆರೆದು

ಒಡಲು ತಣ್ಣಗೆ ಮಾಡಿತು ಜಡಿ ಮಳೆ ಸುರಿದು 


ಎದೆಗೂಡಲಿ ಬಚ್ಚಿಟ್ಟ ಮೊಟ್ಟೆ ಮರಿಯಾಗಿ

ಹಾರಲು ಬಯಸಿದೆ ಆಗಸದಿ ಸೊಗಸಾಗಿ

ಸುಯ್ಯ ಎನ್ನುವ ಗಾಳಿಯಲ್ಲಿ ತೆಲುತಾ

ನೀಲಿಯ ಬಾನಲಿ ಸ್ವರ್ಗವ ಕಾಣತಾ


ಬದುಕಿನ ನಡೆಯಲ್ಲಿ ಬರಿದಾಯ್ತು ಜೀವನ

ಕಾಣದ ಕನಸ್ಸುಗಳ ನೇನೆದಾಯ್ತು ಈ ಮನ

ನೆನ್ನೆಯ ನೆನಪುಗಳು ಕಾಡುತ್ತಿವೆ ನೂರು

ನುಚ್ಚು ನೂರಾಗಿದೆ ಹೃದಯ ಒಂಚೂರು



ರಾಜ್ಯಮಟ್ಟದ ಕಾವ್ಯ ಕಮ್ಮಟದಲ್ಲಿ ಇಂದು ವಾಚಿಸಿದ ಕವನ


**********ರಚನೆ*********

ಡಾ.ಚಂದ್ರಶೇಖರ್. ಸಿ.ಹೆಚ್

Comments

Popular posts from this blog

ಭಾವಗೀತೆ -51

ಭಾವ ಗೀತೆ-1

ಭಾವ ಗೀತೆ- 20