Posts

Showing posts from April, 2024

ಹನಿ ಮುತ್ತು

Image
  ಮೊದಲ ಹನಿಯೊಂದು ಮೈತಾಗಿ ಕನಸಾಗಿದೆ ಎದೆಯ ಹೊಳಗೊಂದು ಪ್ರೀತಿ ಮಿಂಚಾಗಿದೆ ಕಾಡುವ ಮಳೆರಾಯ ಸುರಿದು ಬೀಡು ನೀನು ಅತ್ತಿದೆ ಭೂಮಿಗೆ ಬೆಂಕಿ ನಂದಿಸಿ ಬೀಡು ನೀನು ಹಸಿರು ಸುಟ್ಟೂಗಿದೆ ಮರಗಳು ಮಾತಾಡಿವೆ ಪ್ರಾಣಿ ಹಕ್ಕಿ ಪಕ್ಷಿಗಳು ನಿನ್ನ ಕರೆದು ಕೂಗಿವೆ ನಿನ್ನ ಮುತ್ತಿನ ಹನಿಗೆ ಮನಸು ತಣ್ಣಗಾಯಿತು ನಿನ್ನ ನರ್ತನಕ್ಕೆ ಕಾದು ಉಸಿರೇ ಸಂಗಿತವಾಯಿತು ಸುರಿದು ಬೀಡು ನೀನು ಕಾಯಲಾರೆ ಇನ್ನೂ ಪ್ರಕೃತಿ ಹಸಿರಗಾಲಿ ಜೀವಸಂಕುಲ ನಿನ್ನ ನೆನೆಯಲಿ *********ರಚನೆ******** ಡಾ. ಚಂದ್ರಶೇಖರ್ ಸಿ. ಹೆಚ್