ಚುಟುಕು ಕವನ -25
🌹🌹ಸೂರ್ಯ 🌹🌹 ನೋಡು ನೋಡು ಕೆಂಪನೆ ಸೂರ್ಯ ಸುಡಿತಿಹ ಬೆಂಕಿಯ ಸೆಲೆಯಂತೆ ಕ್ರೌರ್ಯ ನೀಲಿ ಆಗಸದಿ ದುಂಡು ಬೆಳಕಿನ ಶೌರ್ಯ ಇಬ್ಬನಿ ಹನಿಯೊಂದು ಕೆಣಕುವ ದೈರ್ಯ 🌹🌹 ಚಂದ್ರ 🌹🌹 ನೋಡು ಅಲ್ಲಿ ರಾತ್ರಿಯ ಬೆಳ್ಳನೆ ಚಂದ್ರ ಮೈತುಂಬಾ ಕಾಣುತಿದೆ ಕಪ್ಪನೆ ರಂದ್ರ ನೋಡುತ ಹೊರಟರೆ ಜೋತೆ ನಡೆವ ಇಂದ್ರ ಚಂದ್ರ ನೀನು ದುಂಡನೆ ಹೊಳಪಿನ ಸಾಂದ್ರ 🌹🌹ನಕ್ಷತ್ರ🌹🌹 ಆಕಾಶದಿ ಹಕ್ಕಿಗಳೆ ನೋಡಿ ನಕ್ಷತ್ರ ಬಿಳಿ ಬೆಳಕಿನ ಚುಕ್ಕಿಗಳಂತು ಬಲು ವಿಚಿತ್ರ ಬಿಡಿಸಲು ಹೊರಟಳು ಮಗಳು ಚಿತ್ರ ಚಿತ್ರವು ಹೇಳಿತು ಕಣ್ಣ ಕಂಬನಿ ಪತ್ರ *********ರಚನೆ*********** ಡಾ ಚಂದ್ರಶೇಖರ್. ಸಿ. ಹೆಚ್