
ಮನಸ್ಸಿನ ಅಸೆ ಮನಸ್ಸಿನ ಅಸೆ ಹೇಳಲು ಬಂದೆ ನನ್ನಯ ಕನಸಿಗೆ ನೀ ಬಂದೆ ನೂರೆಂಟು ತವಕವ ನೀ ಏಕೆ ತಂದೆ ಒಡಳಾದಲ್ಲಿ ಮುಚ್ಚಿಟ್ಟು ಕೊಂದೆ ಪೀತಿಯ ಸೊಬಗು ಕನಸಿನ ಮೆರಗು ಮರೆತೋದೆ ನಾನು ನಿನ್ನಯ ಸೆರಗು ಸೊಬಗಿಗೆ ಜಾರಿ ಪ್ರೇಮವ ತೋರಿ ಬಳಿ ಬಂದೆ ನಾನು ಕುದುರೆಯ ಏರಿ ನಿಂತಲ್ಲೆಲ್ಲಾ ನೀನು ಕುಂತಲ್ಲಿ ನೀನು ಮನಸ್ಸನ್ನು ಕದ್ದೆ ಪೀತಿಯ ಗೆದ್ದೇ ಯಾಕೋ ಏನೋ ನಿನ್ನಯ ತವಕ ಮನದಾಸೆಯನ್ನು ಏಳಲು ನಡುಕ ಎಳು ನೀ ಒಮ್ಮೆ ಪ್ರೀತಿಯ ಬಯಕೆ ಕೇಳುವೆ ನಾನು ದೇವರಿಗೆ ಅರಕೆ ಮರೆತೋದ ಅಸೆಪ್ರೀತಿಯ ದುರಾಸೆ ನೋಡುತ ನಿಂತೆ ಯಾರದು ಕನಸೇ ಕನಸ್ಸಲ್ಲಿ ಕಂಡೆ ನಿನ್ನಯ ಸ್ವಪ್ನ ಮನಸ್ಸಲ್ಲಿ ಬಂದು ಕಾಡಿದ ಸ್ವಪ್ನ ಬಾರೆ ಬಾಳಿಗೆ ಸುಂದರ ಕಾಡಿಗೆ ನನ್ನಯ ಅಸೆ ನೀನ್ನಿಟ್ಟ ಮಾಳಿಗೆ ಮಾಳಿಗೆಯೂ ಸೋರಿ ಮಳೆಯಲ್ಲಿ ಜಾರಿ ನಾ ಕಂಡೆ ನನ್ನಯ ಸುಂದರ ಪೋರಿ ಬಾರೆ ನೀ ಚೆಲುವೆ ನಾ ಕಂಡ ಒಲುಮೆ ನಿನ್ನಯ ಪ್ರೀತಿಯಲ್ಲಿ ಈ ನನ್ನ ಕುಲುಮೆ **********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್